ಐಸಿಎಐ - ಎಂಎಸ್‌ಎಂಇ ಮಹೋತ್ಸವ ಕಾರ್ಯಕ್ರಮ

ಉಡುಪಿ, ಜೂ.28: ಐಸಿಎಐ ಉಡುಪಿ ಶಾಖೆ(ಎಸ್‌ಐಆರ್‌ಸಿ)ಯು ಐಸಿಎಐನ ಎಂಎಸ್‌ಎಂಇ ಮತ್ತು ಸಾರ್ಟ್‌ಅಪ್ ಕಮಿಟಿಯ ಸಹಯೋಗದಲ್ಲಿ ಐಸಿಎಐ -ಎಂಎಸ್‌ಎಂಇ ಮಹೋತ್ಸವ-2026 ಕಾರ್ಯಕ್ರಮವನ್ನು ಜೂನ್ 27ರಂದು ಉಡುಪಿಯ ಐಸಿಎಐ ಭವನದಲ್ಲಿ ಆಯೋಜಿಸಲಾಗಿತ್ತು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್‌ಎಂಇ) ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನ, ಸರಕಾರಿ ಯೋಜನೆಗಳು, ಅನುದಾನಗಳು, ಹಣಕಾಸು ಪರಿಹಾರಗಳು, ತಂತ್ರಜ್ಞಾನ ಅವಕಾಶಗಳು ಹಾಗೂ ತೆರಿಗೆ ಮತ್ತು ಕಾನೂನು ಅನುಸರಣೆ ಕುರಿತು ಮಾಹಿತಿ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರಮೇಶ್ ವೈದ್ಯ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ ಎಸ್.ಎಸ್.ನಾಯಕ್ ಹಾಗೂ ಸುಂದರ್ ಎಸ್.ಎಂ. ಎಂಎಸ್‌ಎಂಇಗಳಿಗೆ ಸಂಬಂಧಿ ಸಿದ ವಿವಿಧ ವಿಷಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಶಾಖೆಯ ಅಧ್ಯಕ್ಷ ಸಿಎ ಎಂ.ರಾಘವೇಂದ್ರ ಮೊಗೇರಾಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಸಿಎ ಕೆ.ಲಕ್ಷ್ಮೀಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಸಿಎ ಅಶ್ವತ್ ಜೆ. ಶೆಟ್ಟಿ, ಖಜಾಂಚಿ ಸಿಎ ಅರ್ಚನಾ ಆರ್.ಮೈಯ್ಯ ಮತ್ತು ಸಿಕಾಸಾ ಅಧ್ಯಕ್ಷ ಸಿಎ ಸೋನಿತ್ ಎಸ್.ಶೆಟ್ಟಿ ಉಪಸ್ಥಿತರಿದ್ದರು.




