ಬಂಟಕಲ್ಲು: ಆರ್‌ಎಸ್‌ಬಿ ಸಮುದಾಯ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟ

ಶಿರ್ವ, ಜೂ.29: ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದ ಆಶ್ರಯದಲ್ಲಿ ಬಂಟಕಲ್ಲು ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಮಾಜ ಬಾಂಧವರಿಗಾಗಿ ಕೆಸರು ಗದ್ದೆ ಕ್ರೀಡಾ ಮೇಳವನ್ನು ರವಿವಾರ ಬಂಟಕಲ್ಲು ಸಮೀಪದ ಸಡಂಬೈಲು ಅನಂತರಾಮ ವಾಗ್ಲೆ ಅವರ ಗದ್ದೆಯಲ್ಲಿ ಆಯೋಜಿಸಲಾಗಿತ್ತು.
ಕ್ರೀಡಾ ಮೇಳವನ್ನು ಉದ್ಯಮಿ ರಾಮಚಮದ್ರ ಪ್ರಭು ಪಡುಬೆಳ್ಳೆ, ಶ್ರೀಕ್ಷೇತ್ರ ಬಂಟಕಲ್ಲು ಶ್ರುದುರ್ಗಾಪರಮೆಸ್ವರೀ ದೇವಳದ ಅಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಮಹಿಳಾ ವೇದಿಕೆಯ ಅಧ್ಯಕ್ಷೆ ವನಿತಾ ದೇವೇಂದ್ರ ಬೋರ್ಕಾರ್, ಸೇವಾವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಿಶ್ವನಾಥ್ ಬಾಂದೇಲ್ಕರ್ ಸಹಿತ ಸಮಾಜದ ಗಣ್ಯರು ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿವಿಧ ರೀತಿಯ ಆಟೋಟ ಕ್ರೀಡಾ ಸ್ಫರ್ಧೆಗಳು, ವೈಯುಕ್ತಿಕ ಹಾಗೂ ಗುಂಪು ಆಟಗಳು, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ, ಸೇರಿದಂತೆ ಮಕ್ಕಳಿಗೆ, ಯುವಕರಿಗೆ, ಮಧ್ಯ ವಯಸ್ಕರಿಗೆ ಹಾಗೂ ರಿಯ ನಾಗರಿಕರಿಗೆ ಪುರುಷರು ಮತ್ತು ಮಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಜನಪದೀಯ ರೀತಿಯಲ್ಲಿ ವಿವಿಧ ಸ್ಫರ್ಧೆಗಳು ನಡೆದವು.
ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಜಯರಾಜ್ ಪಾಟ್ಕರ್ ಇನ್ನಂಜೆ ಅವರನ್ನು ಸನ್ಮಾನಿಸ ಲಾಯಿತು. ಶ್ರೀದೇವಳದ ಅಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಸತ್ಯ ಪ್ರಸಾದ್ ಶೆಣೈ, ಡಾ.ಸುಮತಿ ಪ್ರಭು, ಕಮಲಾ ಪ್ರಭು, ನಿವೃತ್ತ ಶಿಕ್ಷಕ ಲಕ್ಷ್ಮಣ ನಾಯಕ್ ವಿಜೇತರಿಗೆ ಬಹುಮಾನ ನೀಡಿದರು. ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.






