ಆಯುಷ್ಮಾನ್ ಯೋಜನೆ ಅಸಮರ್ಪಕತೆ ವಿರೋಧಿಸಿ ಉಡುಪಿ ಡಿಸಿಗೆ ಮನವಿ

ಉಡುಪಿ, ಜೂ.29: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಅಸಮರ್ಪಕತೆ ಕುರಿತು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಜಿಲ್ಲೆಯ ಜನಸಾಮಾನ್ಯರು ಪರದಾ ಡುತ್ತಿದ್ದು ಈ ಕುರಿತ ಸಮಸ್ಯೆಯನ್ನು 7 ದಿನಗಳ ಒಳಗೆ ಪರಿಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರುಗಳಾದ ಗುರುರಾಜ್ ಮಾಡ, ಗಜೇಂದ್ರ ಎಸ್. ಬೆಳಮನೆ, ಪೃಥ್ವಿರಾಜ್ ಮಣಿಪಾಲ, ಕಾರ್ಯದರ್ಶಿಗಳಾದ ರಾಕೇಶ್ ಅಮೀನ್ ಕಾರ್ಕಳ, ನಿತೇಶ್ ಶೆಟ್ಟಿ ಕಪ್ಪೆಟ್ಟು, ಯತೀಶ್ ಶೆಟ್ಟಿ, ಕಾರ್ಯ ಕಾರಿಣಿ ಸದಸ್ಯರಾದ ದರ್ಶಿತ್ ಶೆಟ್ಟಿ, ಗಣೇಶ್ ಕುಂದರ್, ನಿತೇಶ್, ಆದಿತ್ಯ ಆಚಾರ್ಯ, ಗ್ರಾಮಾಂತರ ಅಧ್ಯಕ್ಷ ಸುಶಾಂತ್ ಪೂಜಾರಿ, ಉಪಾಧ್ಯಕ್ಷ ಆಯುಷ್ ಪೂಜಾರಿ ಉಪಸ್ಥಿತರಿದ್ದರು.






