ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ

ಉಡುಪಿ, ಜು.2: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳು ಲಭ್ಯವಿದ್ದು, ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರೈತರು ಜಮೀನಿನ ಆರ್‌ಟಿಸಿ, ಆಧಾರ್ ಪ್ರತಿ, 2 ಪಾಸ್ ಪೋರ್ಟ್ ಸೈಜಿನ ಭಾವಚಿತ್ರ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಪತ್ರ, ಪ.ಜಾ ಮತ್ತು ಪ.ಪಂ. ಇದ್ದಲ್ಲಿ ಪ್ರಮಾಣ ಪತ್ರ ಹಾಗೂ 100 ರೂ. ಛಾಪಾ ಕಾಗದ ದೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸದ್ರಿ ಸೌಲಭ್ಯದ ಪ್ರಯೋಜನ ಪಡೆಯಲು ರೈತರು ಕಡ್ಡಾಯವಾಗಿ ಪ್ರೂಟ್ಸ್ ಐಡಿಯನ್ನು ಹೊಂದಿರಬೇಕು. ರೈತರು ಈಗಾಗಲೇ ಫ್ರುಟ್ಸ್ ಐಡಿಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಆರ್‌ಟಿಸಿಗಳನ್ನು ಫ್ರುಟ್ಸ್ ಐಡಿಗೆ ಜೋಡಣೆ ಮಾಡಿಕೊಳ್ಳುವಂತೆ ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story




