ಚಿನ್ನದ ಅಂಗಡಿಗೆ ನುಗ್ಗಿ ಕಳವು: ಪ್ರಕರಣ ದಾಖಲು

ಗಂಗೊಳ್ಳಿ, ಜು.5: ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಮಾಂಗಲ್ಯ ಎಂಬ ಚಿನ್ನದ ಅಂಗಡಿಗೆ ಜು.4ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಗಟ್ಟಿ, ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮರವಂತೆ ಗ್ರಾಮದ ಹರಿಶ್ಚಂದ್ರ ರಸ್ತೆಯ ವಿಶ್ವನಾಥ ಎಂಬವರ ಚಿನ್ನದ ಅಂಗಡಿಯ ಶಟರ್ ಮುರಿದು ಒಳ ಪ್ರವೇಶಿ ಸಿದ ಕಳ್ಳರು, ಅಂಗಡಿ ಡ್ರಾವರ್ ಮತ್ತು ಕ್ಯಾಬಿನ್‌ನಲ್ಲಿರುವ 1,44,000ರೂ. ಮೌಲ್ಯ ಸುಮಾರು 600 ಗ್ರಾಂ ಬೆಳ್ಳಿ ಗಟ್ಟಿ ಮತ್ತು 1000ರೂ. ನಗದನ್ನು ಕಳವು ಮಾಡಿಕೊಂಡು ಹೋಗಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story




