ಅಜ್ಮೀರ್ ದರ್ಗಾದಿಂದ ಮರಳುತಿದ್ದ ವೃದ್ಧ ನಾಪತ್ತೆ

ಉಡುಪಿ, ಜು.6: ಅಜ್ಮೀರ್ ದರ್ಗಾದ ದರ್ಶನ ಮುಗಿಸಿ ಕುಟುಂಬ ದವರೊಂದಿಗೆ ರೈಲಿನಲ್ಲಿ ಕಾಸರಗೋಡಿಗೆ ವಾಪಾ ಸಾಗುತ್ತಿದ್ದ ಕೇರಳ ರಾಜ್ಯ ಕಾಸರಗೋಡು ತಾಲೂಕು ಮಂಜೇಶ್ವರ ಕನ್ಯಾಲಾ ಹೌಸ್ ಧರ್ಮತಡ್ಕೆ ನಿವಾಸಿ ಮುಸಾ ಯಾನೆ ಅಬುಸಾಲಿ (68) ಎಂಬವರು ಜೂನ್ 27ರಂದು ರಾತ್ರಿ 10 ಗಂಟೆಗೆ ಕಾರವಾರದಿಂದ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಂಗಳೂರಿನ ಸಮೀಪ ಚಲಿಸುತ್ತಿದ್ದ ರೈಲಿನಿಂದ ನಾಪತ್ತೆಯಾಗಿದ್ದಾರೆ.
ರೈಲು ಎಲ್ಲಿಯೋ ನಿಂತ ವೇಳೆ ಯಾವುದೋ ನಿಲ್ದಾಣದಲ್ಲಿ ಇಳಿದು ದಿಕ್ಕು ಕಾಣದೇ ನಾಪತ್ತೆಯಾಗಿರುವುದಾಗಿ ಅಥವಾ ಬೈಂದೂರು ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ. ಇವರು ವಯೋವೃದ್ಧರಾಗಿದ್ದು, ನಡೆದಾಡಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದಾರೆ.
5 ಅಡಿ 11 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಮಲಯಾಳಿ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ 100, 0820-2526444 ಅನ್ನು ಸಂಪರ್ಕಿಸಬಹುದು ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.




