ಸಾಕು ಪ್ರಾಣಿಗಳಿಗೆ ಹಿಂಸೆ: ಪ್ರಕರಣ ದಾಖಲು

ಕೋಟ, ಜು.11: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಹಿಂಭಾಗದ ಎನಿಮಲ್ ರೆಸ್ಕ್ಯೂ ಸೆಂಟರ್ ಎಂಬಲ್ಲಿ ಪ್ರಾಣಿಗಳನ್ನು ಅತ್ಯಂತ ಕಳಪೆ, ಅಮಾನವೀಯ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸಿದ ಸುಧೀಂದ್ರ ಐತಾಳ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.7ರಂದು ಪೇಟಾ ಇಂಡಿಯಾ ಸಂಸ್ಥೆಯ ಮಹೇಶ ಉಡುಪ ಎಂಬವರು ಸೆಂಟರ್‌ಗೆ ತೆರಳಿ ಪರಿಶೀಲಿಸಿದ್ದು, ಆಗ ಅಲ್ಲಿ ಸುಧೀಂದ್ರ ಐತಾಳ್, ಸಾಕು ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸದೇ ಸಾಕು ಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳನ್ನು ಅತ್ಯಂತ ಚಿಕ್ಕ ಹಗ್ಗಗಳಿಂದ ಕಟ್ಟಿಹಾಕಿ ಸಾಕಿರುವುದು ಕಂಡುಬಂದಿದೆ.
ಅಲ್ಲದೆ ಸ್ಥಳದಲ್ಲಿ ಒಂದು ದನದ ಕರುವಿನ ಮೃತದೇಹ ಪತ್ತೆಯಾಗಿದ್ದು ಈ ದನದ ಕರುವು ಸುಮಾರು ದಿನಗಳ ಹಿಂದೆ ಮೃತಪಟ್ಟಿರುವಂತೆ ಕಂಡುಬಂದಿದೆ. ಅದನ್ನು ತೆರವುಗೊಳಿಸದೆ ಕೊಳೆಯಲು ಬಿಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story




