ಪತ್ರಕರ್ತ ನಾಗೇಶ್ ಗಾಣಿಗ ನೇರಳಕಟ್ಟೆ ನಿಧನ

ಕುಂದಾಪುರ, ಜು.15: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಸಿದ್ದಾಪುರ ಭಾಗದ ವಿಜಯಕರ್ನಾಟಕ ದಿನಪತ್ರಿಕೆ ವರದಿಗಾರ, ನಾಗೇಶ್ ಗಾಣಿಗ ನೇರಳಕಟ್ಟೆ (40) ಬುಧವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ನಾಗೇಶ್ ಗಾಣಿಗ ಕಳೆದ ಹಲವು ವರ್ಷಗಳಿಂದ ವಿಜಯಕರ್ನಾಟಕ ವರದಿಗಾರರಾಗಿ ಗ್ರಾಮೀಣ ಭಾಗದ ಸಮಸ್ಯೆ ಗಳ ಬಗ್ಗೆ ತಮ್ಮ ವರದಿಗಾರಿಕೆಯ ಮೂಲಕ ಬೆಳಕು ಚೆಲ್ಲಿದ್ದರು. ನಾಗೇಶ್ ಅವಿವಾಹಿತರಾಗಿದ್ದರು.
ಬುಧವಾರ ಮಧ್ಯಾಹ್ನದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸಂಘದ ಸಕ್ರಿಯ ಸದಸ್ಯರಾದ ನಾಗೇಶ್ ಅವರ ಅಕಾಲಿಕ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲೆಯ ಪತ್ರಕರ್ತ ಸಹೋದ್ಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Next Story




