ಜನಪದ ವೈದ್ಯಸಿರಿ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ

ಉಡುಪಿ, ಜು.16: ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪರಂಪರಾಗತ ವೈದ್ಯ ಪದ್ಧತಿಯನ್ನು ಮುಂದುವರಿಸಿ ಕೊಂಡು ಜನಸೇವೆಯಲ್ಲಿ ತತ್ಪರರಾಗಿ ರುವವರನ್ನು ಗುರುತಿಸಿ, ಅವರ ಜ್ಞಾನ ಭಂಡಾರದ ಉಳಿವಿಗೆ ಹಾಗೂ ಪ್ರೋತ್ಸಾಹಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಇದರ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮೂಲಕ ನೀಡುವ ರಾಜ್ಯ ಮಟ್ಟದ ಜನಪದ ವೈದ್ಯಸಿರಿ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕನಿಷ್ಠ 15 ವರ್ಷ ಸೇವಾನುಭವವುಳ್ಳ ಕರ್ನಾಟಕದ ನುರಿತ ನಾಟಿವೈದ್ಯರು ಅಥವಾ ಅವರ ಪ್ರತ್ಯಕ್ಷ ಮಾಹಿತಿಯು ಳ್ಳವರು ಈ ಕೆಳಗಿನ ವಿವರಗಳನ್ನು ಆಯಾ ಗ್ರಾಮ ಪಂಚಾಯತ್ ಅಧ್ಯಕ್ಷರ ಶಿಫಾರಸು ಪತ್ರದೊಂದಿಗೆ ಕಳುಹಿಸಲು ಕೋರಲಾಗಿದೆ.
ವೈದ್ಯರ ಸಂಪೂರ್ಣ ಹೆಸರು, ಇತ್ತೀಚಿಗಿನ ಭಾವಚಿತ್ರ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ, ಲಿಂಗ, ಖಾಯಂ ವಿಳಾಸ, ದೂರವಾಣಿ ಸಂಖ್ಯೆ, ಯಾವ ಕಾಯಿಲೆಯ ಚಿಕಿತ್ಸೆಯಲ್ಲಿ ಪರಿಣತರು, ಗುರುವಿನ ಹೆಸರು, ಎಷ್ಟು ವರ್ಷದ ಅನುಭವ, ಬಳಸುವ ಔಷಧ ಮೂಲಗಳು (ಸಸ್ಯ/ಖನಿಜ), ಸ್ವಂತ ಔಷಧಿ ತಯಾರಿಸುತ್ತಾರೆಯೇ, ಹಳೆಯ ಗ್ರಂಥಗಳಿವೆಯೇ, ಅನುಭವದ ದಾಖಲಾತಿ ಇದೆಯೋ, ಇತರೆ ಪ್ರಮಾಣ ಪತ್ರ, ಇತರೆ ಸನ್ಮಾನ ಪತ್ರ ಇದ್ದರೆ ಅದರ ಬಗ್ಗೆ ಮಾಹಿತಿ ಯನ್ನು ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ 15ರ ಒಳಗೆ ಕಳುಹಿಸಿ ಕೊಡಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಾಂಶುಪಾಲರು, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಅಂಚೆ: ಕುತ್ಪಾಡಿ ಉಡುಪಿ ಜಿಲ್ಲೆ - 574118.






