ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಉಡುಪಿ, ಜು.22: ಅಂಬಲಪಾಡಿಯ ಪ್ಲಾಟ್ ಒಂದರಲ್ಲಿ ವಾಸವಾಗಿದ್ದು, ಜು.19ರಿಂದ ನಾಪತ್ತೆಯಾಗಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಯುವಕ ಶಿವಪ್ರಸಾದ್ (27) ಇವರ ಮೃತದೇಹ ಇಂದು ಬೆಳಗ್ಗೆ ಪಡುಕೆರೆ ಬೀಚ್ ಬಳಿ ಪತ್ತೆಯಾಗಿದೆ.
ಅವರಿಗಾಗಿ ಹುಡುಕಾಟ ನಡೆಸಿದಾಗ ಶಿವ್ಪಪ್ರಸಾದ್ ಅವರ ಮೋಟಾರು ಸೈಕಲ್ ಬಾರಕೂರು ಸೇತುವೆ ಬಳಿ ಪತ್ತೆಯಾಗಿತ್ತು. ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




