ಶಿರ್ವ: ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿದ ಯುವಕರು

ಶಿರ್ವ: ಗ್ರಾಮ ಪಂಚಾಯತ್ ವ್ಯಾಪ್ತಿಯ ಡಾನ್ ಬಾಸ್ಕೋ– ಶಿರ್ವ ಮಸೀದಿ ಸಮೀಪ, ಶಿರ್ವದಿಂದ ಉಡುಪಿ ಕಡೆಗೆ ಸಾಗುವ ರಸ್ತೆಯಲ್ಲಿದ್ದ ವಾಹನ ಚಾಲಕರಿಗೆ ಅಪಾಯಕಾರಿಯಾಗಿದ್ದ ಗುಂಡಿಯನ್ನು ಸ್ಥಳೀಯರು ಶ್ರಮದಾನದ ಮೂಲಕ ಮುಚ್ಚಿದರು.
ಈ ಕಾರ್ಯದಿಂದ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಿದ್ದು, ಸ್ಥಳೀಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Next Story




