ಕಲ್ಲುಕ್ವಾರೆಯಲ್ಲಿ ಬಿದ್ದು ವ್ಯಕ್ತಿ ಸಂಶಯಾಸ್ಪದ ಮೃತ್ಯು

ಬೈಂದೂರು: ಕಾಲ್ತೋಡು ಬೊಳಂಬಳ್ಳಿಗೆಯ ಕೆಂಪು ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹೇರಂಜಾಲು ಗ್ರಾಮದ ಶಿವಾನಂದ ದೇವಾಡಿಗ (49) ಎಂಬವರು ಇಂದು ಬೆಳಗ್ಗೆ ಕಲ್ಲುಕೋರೆಯಲ್ಲಿ ತಲೆ ತಿರುಗಿ ಬಿದ್ದು ಗಾಯ ಗೊಂಡಿದ್ದವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ಮೃತದೇಹವನ್ನು ನೋಡಿದ ದೇವಾಡಿಗರ ಪತ್ನಿ ಪದ್ಮಾವತಿ, ತಲೆಯ ಮೇಲ್ಬಾಗದಲ್ಲಾದ ಗಾಯದ ಬಗ್ಗೆ ಅನುಮಾನ ವಿರುವುದಾಗಿ ತಿಳಿಸಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story




