ಕಠೋರವಾದ ನಿಯಮ ಗುಪ್ತವಾಗಿ ಜನರ ಮೇಲೆ ಹೇರಿಕೆ: ಆನಗಳ್ಳಿ

ಉಡುಪಿ: ಭಾರತದಲ್ಲಿ ಧಮನಕಾರಿ ಮತ್ತು ಸಿದ್ಧಾಂತವನ್ನು ಹೇರುವ ಮೂಲಕ ಸಮ್ಮತಿಗೆ ಒಳಪಡಿಸುವ ತಂತ್ರವನ್ನು ಮತ್ತು ಕಠೋರವಾದ ನಿಯಮಗಳನ್ನು ಗುಪ್ತವಾಗಿ ಜನರ ಮೇಲೆ ಹೇರಲಾಗುತ್ತದೆ ಎಂದು ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನ ದಲ್ಲಿ ಆಯೋಜಿಸಲಾದ ಜನ ಸಂಸ್ಕೃತಿ- ಬಲ ಸಂಸ್ಕೃತಿ ಕುರಿತು ರಂಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಸಿದ್ಧಾಂತ ಅಂದರೆ ನಿಂತ ನೀರು. ಆ ವಿಚಾರವನ್ನು ಒಪ್ಪುವಂತೆ ಮಾಡಲಾಗುತ್ತದೆ. ಇದು ಎರಡು ಕೂಡ ನಮ್ಮ ದೇಶ ದಲ್ಲಿ ಅಘೋಷಿತವಾಗಿ ನಡೆಯುತ್ತ ಬರುತ್ತಿದೆ. ಇದರ ಪರಿಣಾಮ ಸಾಂಸ್ಕೃತಿಕ ರಂಗದ ಮೇಲೆ ಸಾಕಷ್ಟು ಬೀರುತ್ತಿದೆ ಎಂದು ಅವರು ತಿಳಿಸಿದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.
Next Story




