ಉಡುಪಿ ಶಾಸಕ ಯಶ್ಪಾಲ್ ಸುವರ್ಣರನ್ನು ಕೂಡಲೇ ಬಂಧಿಸಿ: ಸುಂದರ ಮಾಸ್ಟರ್

ಉಡುಪಿ: ಶಾಸಕ ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದಕ ಕೃತ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆರೋಪಿಸಿದ್ದಾರೆ.
ಒಬ್ಬ ಜನಪ್ರತಿನಿಧಿಯಾಗಿ ಗೂಂಡಾ ವರ್ತನೆ ತೋರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಧಿಗೆ ತಕ್ಕುದಾದ ಲಕ್ಷಣಗಳಲ್ಲ. ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುವ ಕೆಲಸ ಮಾಡ್ತೇವೆ. ಪ್ರಕಾಶ್ ರಾಜ್ ಅವರನ್ನು ಅರಬ್ಬೀ ಸಮುದ್ರಕ್ಕೆ ಹಾಕಿ ಮೀನಿಗೆ ಆಹಾರವಾಗುವ ಪರಿಸ್ಥಿತಿ ಬರಬಹುದು ಎನ್ನುವ ಮೂಲಕ ಕೊಲೆಯ ಸಂಚನ್ನು ರೂಪಿಸುವ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಯಶ್ಪಾಲ್ ಸುವರ್ಣನನ್ನು ಈ ಕೂಡಲೇ ಬಂಧಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story




