ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ ಪದವಿ ಪ್ರದಾನ

ಗಂಗೊಳ್ಳಿ, ಆ.1: ಗಂಗೊಳ್ಳಿಯ ತೌಹೀದ್ ಮಹಿಳಾ ವಾಣಿಜ್ಯ ಪದವಿ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಜು.31ರಂದು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸಬಿನಾ ಅಬ್ದುಲ್ ಗಫರ್ ಮಾತನಾಡಿದರು. ತೌಹೀದ್ ಸಮೂಹ ಸಂಸ್ಥೆಯ ಅಧೀಕ್ಷಕಿ ನಿಶಾಕಿರಣ್, ಆಡಳಿತ ವ್ಯವಸ್ಥಾಪಕರಾದ ಅಮ್ಜದ್ ಅಲಿ, ಇಬ್ರಾಹಿಂ ಶೇಕ್, ತೌಹೀದ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಮೇಸ್ತ, ತೌಹೀದ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುನಾ ಬುಖಾರಿ, ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಕ್ಸಾ ಮೆಹಶ್ ಮಾತನಾಡಿದರು. ವಿದ್ಯಾರ್ಥಿಗಳಾದ ಲೆಹರಿನ್ ಕಾರ್ಯಕ್ರಮ ನಿರೂಪಿಸಿ, ನಿದಾ ವಂದಿಸಿದರು
Next Story




