‘ಕಾ ಪುರುಷ್ ಓ ಮಹಾಪುರುಷ್’ ಕೃತಿ ಬಿಡುಗಡೆ

ಉಡುಪಿ, ಆ.2: ಕಲ್ಕೂರ ಪ್ರತಿಷ್ಠಾನ ಕೊಡಿಯಾಲ್‌ಬೈಲ್ ಮಂಗಳೂರು, ಇಂಪು ಗುಂಪು ಬಳಗ ಉಡುಪಿ ವತಿಯಿಂದ ಸಾಹಿತಿ ಎಚ್.ಶಾಂತರಾಜ ಐತಾಳ್ ಬರೆದ ಕಾ ಪುರುಷ್ ಓ ಮಹಾಪುರುಷ್ ಕೃತಿ ಬಿಡುಗಡೆ ಸಮಾರಂಭವು ರವಿವಾರ ಉಡುಪಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಜರಗಿತು.
ಕೃತಿಯನ್ನು ಬಿಡುಗಡೆಗೊಳಿಸಿದ ಕೋಟೇಶ್ವರ ಸ್ಥಿತಿಗತಿ ಸಂಪಾದಕ ಡಾ.ಎನ್.ಭಾಸ್ಕರ ಆಚಾರ್ಯ ಮಾತನಾಡಿ, ಎಚ್.ಶಾಂತರಾಜ ಐತಾಳರು ಈ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿನೂತನವಾದ ಪ್ರಯೋಗ ಮಾಡಿ, ಯಶಸ್ಸು ಕಂಡಿದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಕೃತಿ ಮೂಡಿಬಂದಿದ್ದು, ಇದನ್ನು ಪ್ರತಿಯೊಬ್ಬರು ಓದುವ, ಸಂಗ್ರಹದಲ್ಲಿಟ್ಟುಕೊಳ್ಳ ಬೇಕಾದ ಕೃತಿಯಾಗಿದೆ ಎಂದರು.
ದ.ಕ. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಪಿ. ರಾವ್, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಡಾ.ಕೆ.ಅಶೋಕ ಕಾಮತ್, ಪ್ರಮುಖ ರಾದ ಕದ್ರಿ ನವನೀತ್ ಶೆಟ್ಟಿ, ರಮೇಶ್ ರಾವ್ ಬೀಡು ಉಡುಪಿ, ಡಾ.ಎಂ.ಆರ್.ಅಡಿಗ ಕುಂದಾಪುರ, ಎಚ್.ಪಿ.ರವಿರಾಜ್ ಉಡುಪಿ ಉಪಸ್ಥಿತರಿದ್ದರು.
ಲೇಖಕ ಎಚ್.ಶಾಂತರಾಜ ಐತಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವೀಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು.






