ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ, ಆ.4: ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.27ರಂದು ಐಶ್ಚರ್ಯ ಎಂಬವರ ಕ್ರೆಡಿಟ್ ಕಾರ್ಡ್‌ನ್ನು ಅಪ್‌ಡೇಟ್ ಮಾಡುವಂತೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಿಳಿಸಿದ್ದು ಅವರು ಗೂಗಲ್‌ನಲ್ಲಿ ಕಳುಹಿಸಿದ ಲಿಂಕ್‌ಗೆ ಕ್ಲೀಕ್ ಮಾಡಿದಾಗ ಐಶ್ವರ್ಯ ಅವರ ಕ್ರೆಡಿಟ್ ಕಾರ್ಡನಲ್ಲಿರುವ 1,99,696ರೂ. ಹಣ ಕಡಿತಗೊಂಡಿರುವುದಾಗಿ ದೂರಲಾಗಿದೆ.
Next Story




