ಜೋಗಿ ಸಮಾಜ ಭಾಂದವರಿಗಾಗಿ ಕೆಸರಲ್ಲಿ ಒಂದು ದಿನ ಕಾರ್ಯಕ್ರಮ

ಉಡುಪಿ, ಆ.9: ಜೋಗಿ ಸಮಾಜ ಸೇವಾ ಸಮಿತಿ ಉಡುಪಿ ಹಾಗೂ ಕಾರ್ಕಳ ಘಟಕ, ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆ, ಉಡುಪಿ ಜೋಗಿ ಸಮಾಜ ವಿವಿದೊದ್ದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಹಾಗೂ ಕಾರ್ಕಳ ಘಟಕದ ಜೋಗಿ ಸಮಾಜ ಭಾಂದವರಿಗಾಗಿ ಕೆಸರಲ್ಲಿ ಒಂದು ದಿನ ಕಾರ್ಯಕ್ರಮವನ್ನು ರವಿವಾರ ಉಡುಪಿ ಗುಂಡಿಬೈಲಿನ ಬಳೆಗಾರಬೆಟ್ಟಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮುರಳೀಧರ ಜೋಗಿ ಬ್ರಹ್ಮಗಿರಿ ತೆಂಗಿನ ತೆನೆಯನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ದರು. ಬಳಿಕ ಆಷಾಢದ ವೈವಿಧ್ಯಮಯ ಆಹಾರ ತಿನಿಸುಗಳು ಹಾಗೂ ವೈವಿಧ್ಯಮಯ ಗ್ರಾಮೀಣ ಸೊಗಡಿನ ಆಟಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ ಜೋಗಿ ಮಾತನಾಡಿ, ಧರ್ಮದ ಪರಂಪರೆಯನ್ನು ಪಾಲಿಸುವುದರಿಂದ ಧರ್ಮಸಂಸ್ಥಾಪನದ ಜೊತೆಗೆ ಅರೋಗ್ಯ ಯುತ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜೋಗಿ ಸಮಾಜ ಸೇವಾ ಸಮಿತಿ ಉಡುಪಿ ಕಾರ್ಕಳ ಘಟಕ ಅಧ್ಯಕ್ಷ ಗೋವಿಂದ ಪಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಕುಂದಾಪುರ ಅಧ್ಯಕ್ಷ ದೇವರಾಜ ಕೆ. ಬಳೆಗಾರ ಬೈಂದೂರು, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಮಂಗಳೂರು ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಪ್ರಮುಖರಾದ ನವೀನ್ ಚಂದ್ರಜೋಗಿ, ಹರಿಶ್ಚಂದ್ರ ಜೋಗಿ, ಅಶೋಕ್ ಜೋಗಿ ಕಾರ್ಕಳ, ವಸಂತ ಜೋಗಿ ಎರ್ಮಾಳ್, ಅನುಪಮ ಜೋಗಿ, ಯೋಗಿಣಿ ಜೋಗಿ, ಶೇಖರ ಬಳೆಗಾರ ಕಟ್ಟಬೇಳ್ತುರು, ಶಿವರಾಮ ಬಳೆಗಾರ್, ಕೃಷ್ಣಯ್ಯ ಜೋಗಿ ಅಂಕದಕಟ್ಟೆ, ಸುರೇಖಾ ಉದಯ್ ಜೋಗಿ, ಚಂದ್ರ ಜೋಗಿ ಕೊಲ್ಲೂರು, ರಾಕೇಶ್ ಜೋಗಿ ಪುತ್ತೂರು, ರವಿ ಜೋಗಿ ಕೋಟ, ಗೋಪಾಲಕೃಷ್ಣ ಜೋಗಿ, ನಿತ್ಯಾನಂದ ಜೋಗಿ, ಲಕ್ಷ್ಮಣ ಜೋಗಿ, ಗುಂಡಿಬೈಲು, ಬಾಲಕೃಷ್ಣ ಜೋಗಿ, ಗಣೇಶ್ ಬಳೆಗಾರ್ ಉಪಸ್ಥಿತರಿದ್ದರು.






