ಪ.ಜಾತಿ/ಪ.ಪಂಗಡದ ಜಿಲ್ಲಾ ಮಟ್ಟದ ಜಾಗೃತ ಸಮಿತಿ: ಅರ್ಜಿ ಆಹ್ವಾನ

ಉಡುಪಿ, ಆ.11: ಸರಕಾರದ ಸುತ್ತೋಲೆಯಂತೆ ಪಿಒವಿ ಕಾಯ್ದೆಯ ಅನುಷ್ಠಾನ, ಕಾಯ್ದೆಯಡಿ ನೋಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ/ ನೀಡಲಾದ ಪರಿಹಾರ, ಸಂತ್ರಸ್ತರ ಪುನರ್ವಸತಿ ಇತ್ಯಾದಿಗಳ ಬಗ್ಗೆ ಕ್ರಮವಹಿಸಲು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ (ಪ.ಜಾತಿ-3, ಪ.ಪಂ-2, ಒಟ್ಟು-5) ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿರದ ಇತರ ಪ್ರವರ್ಗಗಳಿಂದ 3 ಜನರನ್ನು 3 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಲು ಜಿಲ್ಲೆಯ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಮಿತಿಗೆ ಸದಸ್ಯರಾಗಬಯಸುವ ಸರ್ಕಾರಿ ನೌಕರರೇತರ ವ್ಯಕ್ತಿಗಳು, ತಮ್ಮ ಸ್ವವಿವರವುಳ್ಳ ಅರ್ಜಿಯನ್ನು ಜಾತಿ ಪತ್ರ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಲ್ಲಿ ಅಂತಹ ವಿವರಗಳನ್ನೊಳ ಗೊಂಡ ದಾಖಲಾತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಸ್ಟ್ 21 ರೊಳಗೆ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, 2ನೇ ಮಹಡಿ, ಬಿ ಬ್ಲಾಕ್ ಮಣಿಪಾಲ ಅನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






