ಟೈಲರ್ಸ್ ಅಸೋಸಿಯೇಶನ್‌ನಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಉಡುಪಿ, ಆ.12: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ನಗರ ಸಮಿತಿ ಶಿರಿಬೀಡು-ಉಡುಪಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆ.9ರಂದು ಕಡಿಯಾಳಿ ಕಮಲಾ ಬಾಯಿ ಹೈಸ್ಕೂಲ್‌ನಲ್ಲಿ ಆಯೋಜಿಲಾಗಿತ್ತು.
ಕಾರ್ಯಕ್ರಮವನ್ನು ಸಾಹಿತಿ ಲೀಲಾವತಿ ಬೈಕಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಮಲಾ ಬಾಯಿ ಹೈಸ್ಕೂಲಿನ ನಿವೃತ್ತ ಅಧ್ಯಾಪಕ ಲಕ್ಷ್ಮಿ ನಾರಾಯಣ ಭಟ್, ಕುಂಜಿಬೆಟ್ಟು ಮಹಿಳಾ ಮಂಡಳಿಯ ಅಧ್ಯಕ್ಷ ಶಾರದಾ ರವೀಂದ್ರ, ಟೈಲರ್ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ದಯಾನಂದ ಕೋಟ್ಯಾನ್, ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುರೇಶ್ ಪಾಲನ್, ಕೋಶಾಧಿಕಾರಿ ದಯಾನಂದ ಪ್ರಭು ಹಿರಿಯಡಕ, ಹಿರಿಯರಾದ ವಿಠಲ ಶೆಟ್ಟಿ, ಗುರುರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಶಿರಿಬೀಡು ನಗರ ಸಮಿತಿಯ ಅಧ್ಯಕ್ಷ ರವಿ ಆಚಾರ್ಯ ವಹಿಸಿದ್ದರು. ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶಾರದಾ ಆಚಾರ್ಯ ಸ್ವಾಗತಿಸಿ ವಂದಿಸಿದರು.
ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್, ಶಿರಿಬೀಡು ನಗರ ಸಮಿತಿಯ ಕೋಶಾಧಿಕಾರಿ ಉಷಾ ಭಟ್ಟ್, ಸಹಕರಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟಿ ತಿಂಗಳ ಸಾಂಪ್ರದಾಯಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.




