ಉಡುಪಿ: ಮಹಿಳೆ ಮೇಲೆ ಬೀದಿ ನಾಯಿ ದಾಳಿ

ಸಾಂದರ್ಭಿಕ ಚಿತ್ರ
ಉಡುಪಿ ಆ.12: ಮಣಿಪಾಲದಲ್ಲಿ ಬೀದಿನಾಯಿ ಮನೆಕೆಲಸದ ಮಹಿಳೆ ಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿ ರುವ ಬಗ್ಗೆ ವರದಿಯಾಗಿದೆ.
ಒಂಟಿ ಮಹಿಳೆ ಹೊರಜಿಲ್ಲೆಯವರಾಗಿದ್ದು ಬಾಡಿಗೆ ಮನೆಯಲ್ಲಿ ವಾಸ ಮಾಡಿ ಬೇರೆಯವರ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ನಾಯಿ ದಾಳಿಯಿಂದಾಗಿ ಕನಿಷ್ಠ 2 ತಿಂಗಳು ಮಹಿಳೆಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದು ಜೀವನ ಸಾಗಿಸಲು ನೊಂದ ಮಹಿಳೆ ಸಂಬಂಧ ಪಟ್ಟವರಲ್ಲಿ ನೆರವು ಕೇಳಿದರು. ಇದಕ್ಕೆ ಸ್ಪಂದಿಸಿದ ವಿಶು ಶೆಟ್ಟಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಆರ್ಥಿಕ ನೆರವು ನೀಡಿದ್ದಾರೆ.
ಬೀದಿ ನಾಯಿ ಕಡಿತದ ಬಗ್ಗೆ ಇಲಾಖೆ ಈವರೆಗೆ ಸರಿಯಾದ ನಿರ್ಧಾರ ಕೈಗೊಂಡಿಲ್ಲ. ಮಕ್ಕಳು ಹಾಗೂ ವೃದ್ಧರು ಬೀದಿ ನಾಯಿಗೆ ಹೆದರಿ ತಿರುಗಾಡಲು ಕಷ್ಟವಾಗುತ್ತದೆ. ಇದರ ಬಗ್ಗೆ ತುರ್ತು ಕ್ರಮ ಅಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.
Next Story




