ಬೆಂಕಿ ಹಚ್ಚಿಕೊಂಡು ವೃದ್ಧೆ ಆತ್ಮಹತ್ಯೆ

ಶಂಕರನಾರಾಯಣ, ಆ.13: ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ಸಿದ್ಧಾಪುರ ಗ್ರಾಮದ ಗಿರಿಜಮ್ಮ ಶೆಡ್ತಿ (82) ಎಂಬ ವೃದ್ಧೆ ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಡಿಸೇಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಹೋಗಿದ್ದ ಮಗ ಶಿವರಾಮ ಶೆಟ್ಟಿ ಬೆಳಗ್ಗೆ 9:45ರ ಸುಮಾರಿಗೆ ಮರಳಿ ಬಂದಾಗ, ಮನೆ ಬಳಿಯಿಂದ ದಟ್ಟ ಹೊಗೆ ಬರುವುದನ್ನು ನೋಡಿ ಧಾವಿಸಿ ಬಂದಾಗ ಅರೆಬೆಂದ ಸ್ಥಿತಿಯಲ್ಲಿ ತಾಯಿ ಇರುವುದು ಕಂಡುಬಂದಿತ್ತು. ಮನೆಯ ಹೊರಗೆ ಅಂಗಳದಲ್ಲಿ ಹಾಸಿಗೆ, ಇನ್ನಿತರ ಬಟ್ಟೆ ಹಾಕಿ ಬೆಂಕಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




