ಲೇಖಕ ವರದರಾಜ ಬಲ್ಲಾಳ್ ನಿಧನ

ಉಡುಪಿ, ಆ.13: ಲೇಖಕ, ಚಿಂತಕ ವಿದ್ವಾನ್ ವರದರಾಜ್ ಬಲ್ಲಾಳ್ ಬುಧವಾರ ತಮ್ಮ 97ರ ಹರೆಯದಲ್ಲಿ ಕಿದಿಯೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
1930ರಲ್ಲಿ ಜನಿಸಿದ್ದ ಬಲ್ಲಾಳರು ಉಡುಪಿಯ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ10 ವರ್ಷಗಳ ಕಾಲ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದ ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 37 ವರ್ಷಗಳ ಕಾಲ ಹಿಂದಿ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದರು.
ಪ್ರೊ. ಜಿಡ್ಡು ಕೃಷ್ಣಮೂರ್ತಿಯವರ ಬರಹದ ವಿಷಯವಾಗಿ ಇವರ ಉಪನ್ಯಾಸಗಳು ಬಾನುಲಿಯಲ್ಲಿ ಅನೇಕ ಭಾರಿ ಬಿತ್ತರವಾಗಿದೆ. ಮುಂಬೈಯ ಶ್ರೀಘನಶ್ಯಾಮದಾಸ ಬಿರ್ಲಾ ಬರೆದ ಪ್ರಸಿದ್ಧ ಹಿಂದಿ ಕೃತಿ ಕೃಷ್ಣಂವಂದೇಜಗದ್ಗುರುಂ ಕೃತಿಯನ್ನು ಬಲ್ಲಾಳರು ಕನ್ನಡಕ್ಕೆ ಭಾಷಾಂತರಿದ್ದರು.
ವರದರಾಜ ಬಲ್ಲಾಳರು ಪತ್ನಿ,ಮೂವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story




