ಹೂಡೆ ಸಾಲಿಹಾತ್‌ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

ಉಡುಪಿ, ಆ.15: ತೋನ್ಸೆ- ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ 80ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಸಮಾಜ ಸೇವಕ ಹಾಗೂ ಗ್ರಾಪಂ ಮಾಜಿ ಸದಸ್ಯ ಮಹೇಶ್ ಪೂಜಾರಿ ಧಜರೋಹಣ ನೆರೆವೆರಿಸಿದರು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಉಮರ್ ಉಸ್ತಾದ್, ಯಾಸೀನ್ ಕೋಡಿಬೇಂಗ್ರೆ, ಸಂಸ್ಥೆಯ ಮಖ್ಯಸ್ಥರು ಉಪಸ್ಥಿತರಿದ್ದರು. ಇಸ್ರಾರ್ ಅಹ್ಮದ್ ಸ್ವಾಗತಿಸಿದರು. ಜಸ್ರ ಫಾತಿಮ ನಿರೂಪಿಸಿ ಅಜ್ವ ಮರ್ಯಮ್ ವಂದಿಸಿದರು.
Next Story




