ಉಡುಪಿ ಜಾಮೀಯ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ, ಆ.15: ಉಡುಪಿ ಜಾಮಿಯ ಮಸೀದಿಯ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ರಿಯಾಝ್ ಅಹಮದ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಶೀದ್ ಅಹಮದ್ ನದ್ವಿ ದೇಶದ ಸ್ವಾತಂತ್ಯಕ್ಕಾಗಿ ಬಲಿದಾನ ನೀಡಿದವರನ್ನು ಸ್ಮರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಮಸೀದಿಯ ಉಪಾಧ್ಯಕ್ಷ ವಿ.ಎಸ್.ಉಮರ್, ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್, ಸಮಿತಿ ಸದಸ್ಯರಾದ ಮುನೀರ್ ಮಹಮ್ಮದ್, ಫಾಯಾಯ್ ಅಹಮದ್, ಇಫ್ತಿಕಾರ್, ರಿಯಾಜ್ ಕುಕ್ಕಿಕಟ್ಟೆ, ನಿಕಟ ಪೂರ್ವಧ್ಯಕ್ಷ ಯಾಸೀನ್ ಪಾಪ್ಯುಲರ್, ಜಮಾತ್ ಸದಸ್ಯರು ,ಮುಸಲ್ಲಿ ಬಾಂಧವರು, ಮದ್ರಸದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಸೀದಿಯ ಮುಹಜ್ಜಿನ್ ಯೂನಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story




