ಬೃಹತ್ ಗಾತ್ರದ ರಾಷ್ಟ್ರಧ್ವಜ ಪ್ರದರ್ಶನ

ಉಡುಪಿ, ಆ.15: ಉಡುಪಿ ಜಿಲ್ಲಾ ನಾಗರೀಕ ಸಮಿತಿ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ನಾಗರೀಕ ಸಮಿತಿಯ ಕಚೇರಿಯ ಮುಂಭಾಗ ಬೃಹತ್ ಗಾತ್ರದ ರಾಷ್ಟ್ರದ್ವಜವನ್ನು ಪ್ರದರ್ಶಿಸುವ ಮೂಲಕ 80ನೇ ಸ್ವಾತಂತ್ರೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭೀಮಾ ಜುವೆಲ್ಲರ್ಸ್‌ನ ಮ್ಯಾನೇಜರ್ ಆಶೀಶ್ ಶುಭ ಕೋರಿದರು. ಈ ಸಂದರ್ಭದಲ್ಲಿ ಮಿತ್ರ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ವನಿತಾ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಮೊದಲಾದವರು ಉಪಸ್ಥಿತರಿದ್ದರು.
Next Story




