ಸಾಯಿರಾಧಾ ಪ್ರೈಡ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಉಡುಪಿ, ಆ.15: ಬ್ರಹ್ಮಗಿರಿಯ ಸಾಯಿ ರಾಧಾ ಪ್ರೈಡ್ ಅಪಾರ್ಟ್ ಮೆಂಟ್ ಓನರ್ಸ್ ಅಸೋಸಿಯೇಷನ್ ವಸತಿ ಸಂಕೀರ್ಣದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಹಿರಿಯ ಸದಸ್ಯ ಗಣೇಶ್ ಪೈ ನೆರವೇರಿಸಿದರು.
ಆಡಳಿತ ಮಂಡಳಿಯ ಗೌರವಾಧ್ಯಕ್ಷ ದಿನಕರ್, ವಸತಿ ಸಂಕೀರ್ಣದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತರಾದ ಮಾಜಿ ವ್ಯವಸ್ಥಾಪಕ ರವಿ ನಾಯ್ಕ್ ಹಾಗೂ ವಿದ್ಯಾರ್ಥಿ ಅಂಶುಲ್ ಶರುಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರವಿರಾಜ ನಾಯಕ್ ಸ್ವಾಗತಿಸಿ, ವಂದಿಸಿದರು.
Next Story




