ಸಿಪಿಎಂ ಮುಖಂಡ ಗೋಪಾಲ ಶೆಟ್ಟಿಗಾರ್‌ಗೆ ಶ್ರದ್ಧಾಂಜಲಿ

ಕುಂದಾಪುರ, ಆ.16: ಸಿಪಿಐಎಂ ಪಕ್ಷದ ಹಿರಿಯ ಮುಖಂಡ, ಬಸ್ರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಬಸ್ರೂರು ವಿಎಸ್ ಎಸ್‌ಎಸ್‌ಎನ್‌ನ ನಿರ್ದೇಶಕ ಗೋಪಾಲ್ ಶೆಟ್ಟಿಗಾರ್ ಅವರಿಗೆ ಸಿಪಿಐಎಂ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಯುವಕರಾಗಿದ್ದಾಗ ಯುವಜನ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶೆಟ್ಟಿಗಾರರು, ರೈತ ಕೃಷಿಕೂಲಿ ಕಾರರ ಹೋರಾಟದಲ್ಲಿ ಕೊನೆಯವರೆಗೂ ಸಕ್ರಿಯರಾಗಿದ್ದರು. ಪಕ್ಷಕ್ಕೆ ಅವರ ಅನನ್ಯ ಕೊಡುಗೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು.
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ವಿ.ನರಸಿಂಹ, ಮಹಾಬಲ ವಡೇರಹೋಬಳಿ, ಕೆ.ಶಂಕರ್, ಜಿಲ್ಲಾ ಮುಖಂಡರಾದ ಎ.ನರಸಿಂಹ, ಚಂದ್ರಶೇಖರ್ ವಿ., ನಾಗರತ್ನ ನಾಡ, ಬಲ್ಕಿಸ್, ಶೀಲಾವತಿ, ಸುರೇಂದ್ರ ಉಪಸ್ಥಿತರಿದ್ದರು.
Next Story




