ಸ್ತನ್ಯಪಾನ -ಪೌಷ್ಠಿಕ ಆಹಾರ ಕುರಿತು ಮಾಹಿತಿ ಕಾರ್ಯಾಗಾರ

ಶಿರ್ವ: ಶಿರ್ವ ರೋಟರಿ ವತಿಯಿಂದ ಶಿರ್ವ ಅಂಗನವಾಡಿಯಲ್ಲಿ ಮಂಗಳವಾರ ಮಕ್ಕಳ ಪೋಷಕರಿಗೆ ಸ್ತನ್ಯಪಾನ ಮತ್ತು ಪ್ಠೌಕ ಆಹಾರ ಕುರಿತು ಮಾತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ನರ್ಸಿಂಗ್ ಕಾಲೇಜು ಮೂಡುಬಿದ್ರಿ ಇಲ್ಲಿನ ಸುಪರಿಂಡೆಂಟ್ ಡೈನಾ ವಿಲ್ಮಾ ಮೆಂಡೋನ್ಸಾ ಭಾಗವಹಿಸಿ ತಾಯಂದಿರಿಗೆ ಮಕ್ಕಳ ಆರೈಕೆ, ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರದ ಕುರಿತು ಉಪಯುಕ್ತ ಮಾತಿ ನೀಡಿ ತಾಯಂದಿರೊಂದಿಗೆ ಸಂವಾದ ನಡೆಸಿದರು.
ಅಂಗನವಾಡಿ ಶಿಕ್ಷಕಿ ರೇಖಾ, ಹಿರಿಯರಾದ ರಿಚಾರ್ಡ್ ಫೆರಾವೊ, ಹೆರಾಲ್ಡ್ ಕುಟಿನ್ಹೋ, ಪ್ರಾನ್ಸಿಸ್ ಕಸ್ತಲಿನೊ, ಅಂಗನವಾಡಿ ಸಹಾಯಕಿ ಪ್ರಫುಲ್ಲಾ, ಮಕ್ಕಳ ಪೋಷಕರು,ಮಳೆಯರು ಉಪಸ್ಥಿತರಿದ್ದರು.
ಶಿರ್ವ ರೋಟರಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಸ್ವಾಗತಿಸಿದರು. ಮೌರಿಸ್ ಕ್ವಾಡ್ರಸ್ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ವಲಯ ಸೇನಾನಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು.
Next Story




