ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಗಂಗೊಳ್ಳಿ, ಆ.19: ಮೀನುಗಾರರೊಬ್ಬರು ಮೀನುಗಾರಿಕೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಆ.19ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮರವಂತೆ ಗ್ರಾಮದ ನಾಗರಾಜ ಖಾರ್ವಿ(40) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮರವಂತೆ ಬಂದರಿನಿಂದ ದೋಣಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದು, ದೋಣಿ ಸುಮಾರು 200 ಮೀಟರ್ ಸಮುದ್ರ ದಲ್ಲಿ ಹೋಗುತ್ತಿರುವಾಗ ಒಮ್ಮಲೇ ಜೋರಾಗಿ ಗಾಳಿ ಬೀಸಿತೆನ್ನಲಾಗಿದೆ. ಇದರ ಪರಿಣಾಮ ದೋಣಿಯು ನೀರಿನಲ್ಲಿ ತೇಲಾಡಿದ್ದು ಇದರಿಂದ ನಾಗರಾಜ ಖಾರ್ವಿ ಆಯತಪ್ಪಿ ದೋಣಿಯಿಂದ ನೀರಿಗೆ ಬಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡ ನಾಗರಾಜ ಖಾರ್ವಿಯನ್ನು ಇತರ ಮೀನು ಗಾರರು ಕೂಡಲೇ ಮೇಲಕ್ಕೆತ್ತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ನಾಗರಾಜ ಖಾರ್ವಿ ಮೃತಪಟ್ಟಿರುವು ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




