ಓಣಂ ಸಂದರ್ಭದಲ್ಲಿ ಕೊಂಕಣ ರೈಲ್ವೆಯಿಂದ ವಿಶೇಷ ರೈಲು

ಉಡುಪಿ, ಆ.22: ಕೇರಳದ ಓಣಂ ಹಬ್ಬದ ಸಂದರ್ಭದಲ್ಲಿ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ. ಈ ರೈಲು ಮುಂಬಯಿಯ ಲೋಕಮಾನ್ಯ ತಿಲಕ್ ಟರ್ಮಿನಲ್ ಹಾಗೂ ತಿರುವನಂತಪುರ ಉತ್ತರ ನಡುವೆ ರವಿವಾರ ಸಂಚರಿಸಲಿದೆ. ಆ.23ರ ರವಿವಾರ ಸಂಜೆ 4:00ಗಂಟೆಗೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಪ್ರಯಾಣ ಆರಂಭಿ ಸುವ ಈ ರೈಲು ಮರುದಿನ ರಾತ್ರಿ 11:30ಕ್ಕೆ ತಿರುವನಂತಪುರ ಉತ್ತರ ನಿಲ್ದಾಣ ತಲುಪಲಿದೆ.
ರೈಲು ನಂ.01463 ಲೋಕಮಾನ್ಯ ತಿಲಕ್- ತಿರುವನಂತಪುರಂ ಉತ್ತರ ವಿಶೇಷ ರೈಲು ಆ.29ರ ಶನಿವಾರ ಅಪರಾಹ್ನ 2 ಗಂಟೆಗೆ ತಿರುವನಂತಪುರ ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಮಧ್ಯರಾತ್ರಿ 12:55ಕ್ಕೆ ಮುಂಬಯಿ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.
ಈ ರೈಲಿಗೆ ಕರ್ನಾಟಕ ಕರಾವಳಿಯಲ್ಲಿ ಕಾರವಾರ, ಕುಮಟಾ, ಮುರ್ಡೇಶ್ವರ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್ ಹಾಗೂ ಕಾಸರಗಡುಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story




