ಉಡುಪಿ: ನಿದ್ದೆಯಲ್ಲಿ ಮಂಚದಿಂದ ಬಿದ್ದು ವ್ಯಕ್ತಿ ಮೃತ್ಯು

ಉಡುಪಿ, ಆ.23: ನಿದ್ದೆಯಲ್ಲಿ ಮಂಚದಿಂದ ಉರುಳಿ ಬಿದ್ದು ಗಾಯಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ಕೋರ್ಟ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಉಡುಪಿ ಕೋರ್ಟ್ ಎದುರಿರುವ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ರಾಮರಥನ್ ಅಡ್ಯಂತಾಯ (70) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಪೋಲಿಸ್ ಠಾಣೆಯ ಎಸ್ಸೈ ಭರತೇಶ್, ಮುಖ್ಯ ಆರಕ್ಷಕರಾದ ಸಂತೋಷ್, ಬಶೀರ್, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಿ, ಇಲಾಖೆಗೆ ನೆರವಾದರು.
Next Story




