ಮದರಸ ಶಿಕ್ಷಣದಲ್ಲಿ ಡಿಜಿಟಲ್ ತಂತ್ರಜ್ಞಾನ: ‘ಮದರಸಾ ಮ್ಯಾನೇಜ್ಮೆಂಟ್ ಆ್ಯಪ್’ ಅನಾವರಣ

ಕಾಪು, ಆ.23: ಕುಂಜೂರು ಪಣಿಯೂರು ನೂರುಲ್ ಇಸ್ಲಾಂ ಮದರಸದ ವತಿಯಿಂದ ಇ26 ಮಿಡಿಯಾಸ್ ಅಭಿವೃದ್ಧಿಪಡಿಸಿರುವ ಮದ್ರಸ ಮ್ಯಾನೇಜ್ ಮೆಂಟ್ ಆಪ್‌ನ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ಖತೀಬ್ ತೊಡರ್ ಉಸ್ತಾದ್ ಸಾನ್ನಿಧ್ಯದಲ್ಲಿ ಮದರಸಾ ಮ್ಯಾನೇಜ್ಮೆಂಟ್ ಆಪ್‌ನ್ನು ಉದ್ಘಾಟಿಸಲಾಯಿತು. ಬ್ರಾಕ್‌ಝಿರೋ ಟೆಕ್ ಪ್ರೈ ಲಿಮಿಟೆಡ್‌ನ ಸದಸ್ಯ ಶಮೀರ್ ಅಹ್ಮದ್, ಸಿಇಓ ಇಸ್ಮಾಯಿಲ್ ಝಬೀಹ್, ಎಂಡಿ ಬಿಲಾಲ್ ಮೊಹಮ್ಮದ್ ಸುಲೈಮಾನ್, ಇ26 ಮಿಡಿಯಾಸ್‌ನ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಶರೀಫ್, ಸಿಇಓ ಮೊಹಮ್ಮದ್ ಹಝೀಮ್ ಶೈಮ್ ಮೊದಲಾದವರು ಉಪಸ್ಥಿತರಿದ್ದರು.
ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಹಾಗೂ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸುಲಭವಾಗಿ ನಿರ್ವಹಿಸುವ ಉದ್ದೇಶದಿಂದ ಈ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದೆ. ವಿದ್ಯಾರ್ಥಿಗಳ ಮಾಹಿತಿ, ತರಗತಿಗಳ ವಿವರ, ಹಾಜರಾತಿ, ಪರೀಕ್ಷಾ ಮಾಹಿತಿ, ಶುಲ್ಕ ಹಾಗೂ ಮದರಸಾ ಆಡಳಿತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳನ್ನು ಒಂದೇ ವೇದಿಕೆಯ ಮೂಲಕ ನಿರ್ವಹಿಸಲು ಈ ಆಪ್ ಸಹಕಾರಿಯಾಗಲಿದೆ.
ಮದರಸಾ ಆಡಳಿತವನ್ನು ಹೆಚ್ಚು ವ್ಯವಸ್ಥಿತ, ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತಗೊಳಿಸುವಲ್ಲಿ ಈ ಆಪ್ ಮಹತ್ವದ ಪಾತ್ರ ವಹಿಸಲಿದೆ. ನೂರುಲ್ ಇಸ್ಲಾಂ ಮದರಸಾ ಈ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರು ವುದು ಮದರಸಾ ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ತಂತ್ರ ಜ್ಞಾನದ ಬಳಕೆಗೆ ಮತ್ತೊಂದು ಉತ್ತಮ ಹೆಜ್ಜೆಯಾಗಿದೆ ಎಂದು ಮಹಮ್ಮದ್ ಶರೀಫ್ ತಿಳಿಸಿದ್ದಾರೆ.






