ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ, ಆ.23: ಸಮುದ್ರ ಮಧ್ಯೆ ಬೋಟಿನಿಂದ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಓಡಿಸ್ಸಾ ರಾಜ್ಯದ ಗಜ್ ಬೇಹರ(36) ಎಂದು ಗುರುತಿಸ ಲಾಗಿದೆ. ಮಲ್ಪೆಯ ಲತಾ ಕುಂದರ್ ಎಂಬವರ ಮಾಲಿಕತ್ವದ ಹೆಸರಿನ ಶ್ರೀಮಾತಾ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಆ.22ರಂದು ಬೆಳಗ್ಗಿನ ಜಾವಾ ಮಲ್ಪೆ ಬಂದರಿನಿಂದ ಬೋಟಿನಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು.
ಸಮುದ್ರ ಮಧ್ಯೆ ಮೀನುಗಾರಿಕೆ ಬಲೆಯನ್ನು ಬಲೆಯನ್ನು ಮೇಲಕ್ಕೆ ಎಳೆಯುವಾಗ ಗಜ್ ಬೇಹರ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇತರರು ಸಮುದ್ರದಲ್ಲಿ ಹುಡುಕಾಡಿದ್ದು, ಸಂಜೆ ವೇಳೆ ಗಜ್ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




