ಬಂಟಕಲ್: ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆ

ಉಡುಪಿ, ಆ.24: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್‌ಟಿ ಘಟಕದ ವತಿಯಿಂದ ರಾಷ್ಟ್ರೀಯ ಬಾಹ್ಯಕಾಶ ದಿನದ ಅಂಗವಾಗಿ ‘ಬಿಯೋಂಡ್ ದ ಬ್ಲ್ಯೂ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆ.24ರಂದು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ.ನಿಶ್ಕಲಾ ಕೆ.ಆರ್. ಮಾತನಾಡಿದರು. ಸೂರ್ಯನ ಕಾಂತಕ್ಷೇತ್ರ, ಸನ್‌ಸ್ಪಾಟ್‌ಗಳು, ಸೌರ ಚಕ್ರಗಳು, ಸೌರ ಜ್ವಾಲೆಗಳು ಮತ್ತು ಕೊರೊನಲ್ ಮಾಸ್ ಇಂಜೆಕ್ಷನ್‌ಗಳ ಕುರಿತು ಅವರು ಮಾಹಿತಿ ನೀಡಿದರು. ಜೊತೆಗೆ ಇಸ್ರೋದ ಆದಿತ್ಯ ಐ1 ಮಿಷನ್‌ನ ಮಹತ್ವವನ್ನು ವಿವರಿಸಿದರು.
ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿಯರಾದ ದೀಪ್ತಿ ಮತ್ತು ನೇಹಾ ಅವರು ’ಪಾಲೆ ಬ್ಲ್ಯೂ ಡಾಟ್’ ಹಾಗೂ ಕಾಸ್ಮೆಟಿಕ್ ಕೆಲೆಂಡರ್’ ಪರಿಕಲ್ಪನೆಗಳ ಮೂಲಕ ವಿಶ್ವದ ಅಗಾಧತೆ ಮತ್ತು ಮಾನವ ಇತಿಹಾಸದ ಅಲ್ಪಾವಧಿಯನ್ನು ಪರಿಚಯಿಸಿದರು. ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಸ್ವಾಗತಿಸಿದರು.
Next Story




