ಫ್ಲ್ಯಾಟ್ ಮಾರಾಟ ಮಾಡದೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಕಾಪು, ಆ.26: ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಫ್ಲ್ಯಾಟ್ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಚ್ಚಿಲದ ಹಸನ್ ಯು.(45) ಎಂಬಾತ ಮೂಡಬಿದ್ರೆಯ ಹಲಿಮಾಬಿ (39) ಎಂಬವರಿಗೆ 2015ರಲ್ಲಿ ಮೂಳೂರಿನಲ್ಲಿ ನಿರ್ಮಿಸುತ್ತಿರುವ ’ಮೂಳೂರು ಹೆರಿಟೇಜ್ ಅಪಾರ್ಟ್‌ಮೆಂಟ್’ನ 2ನೇ ಮಹಡಿಯಲ್ಲಿರುವ ಫ್ಲಾಟ್‌ನ್ನು 27,56,000 ರೂ.ಗೆ ಮಾರಾಟ ಮಾಡಲು ಉದ್ದೇಶಿಸಿದ್ದನು. ಆರು ತಿಂಗಳೊಳಗೆ ನಿರ್ಮಾಣವನ್ನು ಪೂರ್ಣಗೊಳಿಸಿ ಫ್ಲ್ಯಾಟ್ ಹಸ್ತಾಂತರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಲಿಮಾಬಿ, ಆರೋಪಿಗೆ 2018-19ರಲ್ಲಿ ಒಟ್ಟು 15ಲಕ್ಷ ರೂ. ಪಾವತಿಸಿದ್ದರು.
ಆದರೆ ಆರೋಪಿಯು ಇಂದಿನವರೆಗೂ ಫ್ಲ್ಯಾಟ್ ಹಸ್ತಾಂತರಿಸದೆ, ಹಣವನ್ನು ಕೂಡ ಮರುಪಾವತಿಸದೆ ವಂಚಿಸಿದ್ದಾರೆ. ಅಲ್ಲದೆ ಆರೋಪಿಯು ರೌಡಿಗಳ ಸಹಾಯದಿಂದ ಹಲಿಮಾಬಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story




