ಉಡುಪಿ, ಆ.26: ಅಲೆವೂರು ಇಂದಿರಾ ನಗರದ ಬಾಡಿಗೆ ಮನೆಯ ನಿವಾಸಿ ಪವನ್ ಕುಮಾರ್(24) ಎಂಬವರು ಆ.8ರಂದು ರಾತ್ರಿ 9ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.