ಹೆಬ್ರಿ ತಾಲೂಕು ನೂತನ ರೆಡ್‌ಕ್ರಾಸ್ ಘಟಕ ಉದ್ಘಾಟನೆ

ಉಡುಪಿ, ಆ.27: ಕಳೆದ ಒಂದುವರೆ ಶತಮಾನಗಳಿಂದ ವಿಶ್ವದಲ್ಲಿ ವಿಶ್ವ ಶಾಂತಿಗಾಗಿ ಏಕತೆ ಮಾನವೀಯ ಸೇವೆಗೈ ಯುತ್ತಿರುವ ಮಹತ್ತರ ಸಂಸ್ಥೆ ರೆಡ್ ಕ್ರಾಸ್. ರೆಡ್‌ಕ್ರಾಸ್‌ನ ತತ್ವಗಳಾದ ಮಾನವೀಯತೆ ಸ್ವಾತಂತ್ರ್ಯ ಏಕತೆ ಸ್ವಯಂ ಸೇವೆ ವಿಶ್ವವ್ಯಾಪಕತೆಗಳು ಎಲ್ಲರ ಹೃದಯವನ್ನು ತಲುಪಬೇಕು. ಇಂದು ಕೂಡ ಯುದ್ಧ ಭೂಮಿಯಲ್ಲಿ ರೆಡ್‌ಕ್ರಾಸ್ ಮಾನವೀಯ ಸೇವೆ ಮಾಡುತ್ತಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಹೇಳಿದ್ದಾರೆ.
ಹೆಬ್ರಿಯ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ಹೆಬ್ರಿ ತಾಲೂಕಿನ ನೂತನ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ತಾಲೂಕು ರೆಡ್ ಕ್ರಾಸ್ ಸಭಾಪತಿ ವೀಣಾ ಆರ್.ಭಟ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹೆಬ್ರಿ ಠಾಣೆಯ ಉಪನಿರೀಕ್ಷಕ ಚಂದ್ರ ಎ.ಕೆ. ಮಾತನಾಡಿದರು. ಜಿಲ್ಲಾ ಸಭಾಪತಿಗಳು ತಾಲೂಕು ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ವತಿಯಿಂದ ಹೆಬ್ರಿ ತಾಲೂಕಿನ ಆಯ್ದ ಬಡ ಕುಟುಂಬಗಳಿಗೆ ಗೃಹಪಯೋಗಿ ವಸ್ತು ಗಳನ್ನು ಮತ್ತು ಗಾಲಿ ಕುರ್ಚಿಯನ್ನು ಫಲಾನುಭವಿಗೆ ವಿತರಿಸಲಾಯಿತು. ಉದ್ಯಮಿ ಯೋಗೀಶ್ ಭಟ್ ಹೆಬ್ರಿ, ಕಾಡುಹೊಳೆ ಶ್ರೀಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಹೆಬ್ರಿ ರೆಡ್‌ಕ್ರಾಸ್ ಶಾಖೆಯ ಉಪಸಭಾಪತಿ ಡಾ.ವಿದ್ಯಾಧರ ಹೆಗ್ಡೆ ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ಪ್ರಶಾಂತ್ ಪೈ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಪ್ರಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ವಂದಿಸಿದರು.






