ಸಾಲಿಹಾತ್ ಶಾಲೆಯಲ್ಲಿ ಮಣಿಪಾಲ ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾಟ

ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ ಹಾಗೂ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಹೂಡೆ ಇವರ ಸಹಯೋಗದಲ್ಲಿ ಮಣಿಪಾಲ ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ಸಾಲಿಹಾತ್ ಶಾಲಾ ಮೈದಾನದಲ್ಲಿ ಜರಗಿತು.
17 ವಯೋಮಾನದ ಬಾಲಕರ ವಿಭಾಗದಲ್ಲಿ ನಿಟ್ಟೂರು ಪ್ರೌಢ ಶಾಲೆ ವಿನ್ನರ್ ಹಾಗೂ ಪರ್ಕಳ ಪ್ರೌಢ ಶಾಲೆ ಪರ್ಕಳ ರನ್ನರ್, 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ಪ್ರೌಢ ಶಾಲೆ ಕೆಮ್ಮಣ್ಣು ವಿನ್ನರ್ ಹಾಗೂ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಹೂಡೆ ರನ್ನರ್, 14 ವಯೋಮಾನದ ಬಾಲಕರ ವಿಭಾಗದಲ್ಲಿ ನಿಟ್ಟೂರು ಪ್ರೌಢ ಶಾಲೆ ವಿನ್ನರ್ ಹಾಗೂ ದಾರುಸ್ಸಲಾಂ ಪ್ರಾಥುಕ ಶಾಲೆ ಹೂಡೆ ರನ್ನರ್, 14 ವಯೋಮಾನದ ಬಾಲಕಿಯರ ವಿಬಾಗದಲ್ಲಿ ಕಾರ್ಮೆಲ್ ಪ್ರೌಢ ಶಾಲೆ ಕೆಮ್ಮಣ್ಣು ವಿನ್ನರ್ ಹಾಗೂ ಸಾಲಿಹಾತ್ ಪ್ರಾಥಮಿಕ ಶಾಲೆ ಹೂಡೆ ರನ್ನರ್ ಪ್ರಶಸ್ತಿ ಗೆದ್ದು ಕೊಂಡಿತು.
ಪಂದ್ಯಾಟ ಉದ್ಘಾಟನೆ: ಪಂದ್ಯಾಟವನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಯ ಹಿತೈಷಿ, ಉದ್ಯಮಿ ಅನ್ಸಾರ್ ಟಿ.ಎಸ್. ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸನ್ನಿವೇಶಗಳಲ್ಲಿ ’ಪೋಷಕರು ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಟ್ಟರೆ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದ್ರಢರಾಗುತ್ತಾರೆ’ ಎಂದು ಹೇಳಿದರು.
ಖಿಈಅಅಧ್ಯಕ್ಷತೆಯನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ವಹಿಸಿದ್ದರು. ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಶಾಲಾ ಅಕಾಡೆಮಿ ಮುಖ್ಯಸ್ಥ ಅಬ್ದುಲ್ ಹಸೀಬ್ ತರಫ್ದರ್ ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಮತಾ ವಂದಿಸಿದರು. ದೈಹಿಕ ಶಿಕ್ಷಕಿ ಮೇರಿ ಕ್ವೀನಿ ಕಾರ್ಯಕ್ರಮ ನಿರೂಪಿಸಿದರು.






