ಸ್ಕೂಟರ್ ಸಮೇತ ಬಿದ್ದು ಸವಾರ ಮೃತ್ಯು

ಕುಂದಾಪುರ, ಸೆ.1: ಸ್ಕೂಟರ್ ಸಮೇತ ಬಿದ್ದು ಸವಾರರೊಬ್ಬರು ಮೃತಪಟ್ಟ ಘಟನೆ ಆ.31ರಂದು ಸಂಜೆ ವೇಳೆ ಗುಲ್ವಾಡಿ ಶಾಲೆಯ ಬಳಿ ನಡೆದಿದೆ.
ಮೃತರನ್ನು ಕೋಣಿ ಗ್ರಾಮದ ಉಮೇಶ ಪೂಜಾರಿ(58) ಎಂದು ಗುರುತಿಸಲಾಗಿದೆ. ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಸ್ಕೂಟರ್ ಸಮೇತ ಬಿದ್ದರೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




