ಉಡುಪಿಯಲ್ಲಿ ಕರೂರು ವೈಶ್ಯ ಬ್ಯಾಂಕ್ ಶಾಖೆ ಉದ್ಘಾಟನೆ

ಉಡುಪಿ, ಸೆ.1: ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕರೂರು ವೈಶ್ಯ ಬ್ಯಾಂಕ್ (ಕೆವಿಬಿ) ಉಡುಪಿ ಸೇರಿದಂತೆ ದೇಶದ 16 ಕಡೆಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸಿದೆ.
ಉಡುಪಿಯ ಕನಕದಾಸ ಬೀದಿಯ ಪದ್ಮತಾರಾ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಹೊಸ ಶಾಖೆ ಕಾರ್ಯಾರಂಭಿ ಸಿದೆ. ಇದರೊಂದಿಗೆ ಬ್ಯಾಂಕಿನ ಶಾಖಾ ಜಾಲವು ದೇಶಾದ್ಯಂತ 919ಕ್ಕೇರಿದೆ. ತಮಿಳುನಾಡಿನಲ್ಲಿ ಆರು, ಆಂಧ್ರ ಪ್ರದೇಶದಲ್ಲಿ ಐದು, ತೆಲಂಗಾಣದಲ್ಲಿ ಮೂರು, ಕರ್ನಾಟಕ ಮತ್ತು ದೆಹಲಿ ಎನ್ಸಿಆರ್‌ನಲ್ಲಿ ತಲಾ ಒಂದು ಶಾಖೆಯನ್ನು ತೆರೆಯಗಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹ ಕುಲಪತಿ ಡಾ.ಎಚ್. ಎಸ್. ಬಲ್ಲಾಳ್ ಶಾಖೆಯನ್ನು ಉದ್ಘಾಟಿಸಿದರು. ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಎಸ್. ಪೈ ಎಟಿಎಂ ಸೌಲಭ್ಯ ಉದ್ಘಾಟಿಸಿದರು. ಅಭರಣ್ ಜ್ಯುವೆಲ್ಲರ್ಸ್‌ನ ಸಂಧ್ಯಾ ಎಸ್. ಕಾಮತ್ ದೀಪ ಬೆಳಗಿದರು. ಕರೂರು ವೈಶ್ಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್ ಬಾಬು ವರ್ಚುವಲ್ ಆಗಿ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ಹೇಳಿದೆ.






