ಡಾ.ಶಿವಕುಮಾರ ಅಳಗೋಡುಗೆ ಯುವಪುರಸ್ಕಾರ

ಉಡುಪಿ, ಸೆ.2: ವೇಷ ಸಾಂಸ್ಕೃತಿಕ ಪ್ರತಿಷ್ಠಾನ ನಿಟ್ಟೂರು ವತಿಯಿಂದ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು, ಪೆರ್ಡೂರು ಮೇಳದ ಚೆಂಡೆವಾದಕ ನಯನ ಕುಮಾರ ನಿಟ್ಟೂರು ಅವರಿಗೆ ಇತ್ತೀಚೆಗೆ ಯುವಪುರಸ್ಕಾರ ನೀಡಿ ಗೌರಸಲಾಯಿತು.
ನಾಟಿವೈದ್ಯ ಸುಬ್ರಹ್ಮಣ್ಯ ಕನಗೋಡುಮನೆ ಅವರನ್ನು ಇದೇ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಯಕ್ಷಗುರು ಸುಬ್ರಹ್ಮಣ್ಯ ಡಿ.ಎಸ್., ರಾಮಚಂದ್ರ ಎ.ಓ.ಅಂಬ್ಲಾಡಿ, ಸುರೇಶ ಬಿ.ಎಚ್, ಜೆ.. ಸುಬ್ರಹ್ಮಣ್ಯ ಕಾರ‌್ಯಕ್ರಮದ ಸಂಯೋಜಕರಾಗಿರುವ ರಾಘು ನಾಗೋಡಿ, ಶ್ವನಾಥ ನಾಗೋಡಿ ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ ಸಂಕದಗುಂಡಿ ಗಣಪತಿ ಭಟ್, ಪವನ್ ಕಿರಣಕೆರೆ, ಹರೀಶ್ ಬಳಂತಿಮೊಗರು, ಗಣೇಶ ಕನ್ನಡಿಕಟ್ಟೆ, ಡಾ. ಶಿವಕುಮಾರ ಅಳಗೋಡು, ಪ್ರಸನ್ನ ಭಟ್ ಬಾಳ್ಕಲ್, ರಾಘವೇಂದ್ರ ಹೆಗಡೆ ಯಲ್ಲಾಪುರ, ನಯನಕುಮಾರ್ ನಿಟ್ಟೂರು ಇವರಿಂದ ’ರಾಜಾಯಯಾತಿ’ ತಾಳಮದ್ದಲೆ ಪ್ರದರ್ಶನಗೊಂಡಿತು.
Next Story




