ಕೊಡಗಿನ ಚಾಲಕ ಅನುಮಾನಾಸ್ಪದವಾಗಿ ಮೃತ್ಯು

ಕುಂದಾಪುರ, ಸೆ.2: ಕೊಡಗು ಜಿಲ್ಲೆಯ ಚಾಲಕರೊಬ್ಬರು ಅನುಮಾನಾಸ್ಪದ ವಾಗಿ ಮೃತಪಟ್ಟ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಕೊಡಗು ಜಿಲ್ಲೆಯ ಮಣಿಕಂಠ ಎನ್.ಎ.(46) ಎಂದು ಗುರುತಿಸಲಾಗಿದೆ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಮಣಿಕಂಠ, ಮಡಿಕೇರಿಯ ಪಾಲಿಬೆಟ್ಟದ ನಿವಾಸಿ ರಘು ಎಂಬವರನ್ನು ಚಿಕಿತ್ಸೆ ಬಗ್ಗೆ ಆಗಾಗ ಕಾರಿನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಅದೇ ರೀತಿ ಅವರು ರಘು ತಮ್ಮನ ಮನೆಯಾದ ಕುಂಭಾಶಿ ಗ್ರಾಮದ ವಿನಾಯಕ ನಗರಕ್ಕೆ ಬಂದು ಹೋಗುತ್ತಿದ್ದರು.
ಆ.30ರಂದು ಕುಂಭಾಶಿಯ ರಘು ಅವರ ತಮ್ಮನ ಮನೆಗೆ ಬಂದ ಮಣಿಕಂಠ, ಸೆ.1ರಂದು ಬೆಳಗ್ಗೆ ಮನೆಯ ಬಾತ್ ರೂಮ್‌ನ ಮಾಡಿನ ಕಬ್ಬಿಣದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಮಣಿಕಂಠ ಮರಣದಲ್ಲಿ ಸಂಶಯವಿರುವುದಾಗಿ ಮೃತರ ಅಣ್ಣ ಅಣ್ಣಪ್ಪ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story




