ಕೂಲಿ ಕಾರ್ಮಿಕ ನಾಪತ್ತೆ

ಉಡುಪಿ, ಸೆ.2: ಮೂಲತಃ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕು ಮುದ್ಗಲ್ ಗ್ರಾಮಾಂತರ ಮೆಗಳ ಪೇಟೆ ನಿವಾಸಿ, ಪ್ರಸ್ತುತ ಕೂಲಿ ಕೆಲಸ ಮಾಡಿಕೊಂಡು ವಾರಂಬಳ್ಳಿ ಗ್ರಾಮದ ಎಸ್‌ಎಂಎಸ್ ಶಾಲೆ ಬಳಿ ವಾಸ ಮಾಡಿ ಕೊಂಡಿರುವ ನಿಂಗಪ್ಪ (44) ಎಂಬವರು ಮೇ 24ರಂದು ಅಪರಾಹ್ನ 12:00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ ಕರೆ ಮಾಡಿ ಮಾತನಾಡಿ ದವರು, ನಂತರದಿಂದ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.
5 ಅಡಿ 8 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಣಕಲು ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2461044, 9480805453ನ್ನು ಸಂಪರ್ಕಿಸಬಹುದು ಎಂದು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story




