ವಿಟ್ಲ ಪಿಂಡಿ ಪ್ರಯುಕ್ತ ಮೂಡೆಹಾಲು ವಿತರಣೆ

ಉಡುಪಿ, ಸೆ.5: ಶಂಕರಪುರ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶನಿವಾರ ಉಡುಪಿ ಶಾಸಕರ ಕಚೇರಿ ಬಳಿ ಸಾರ್ವಜನಿಕರಿಗೆ ಮೂಡೆ ಹಾಲು ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಂಕರಪುರ ಪೀಠಾಧೀಶ ಸಾಯಿ ಈಶ್ವರ ಗುರೂಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸತೀಶ್ ದೇವಾಡಿಗ, ರೇಷ್ಮಾ ಸಂತೋಷ ಹೆಗ್ಡೆ, ವಾರಿಜ ಕಲ್ಮಾಡಿ, ಮಾಜಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಗಜೇಂದ್ರ ಬೈಂದೂರು, ನಾಗರಾಜ್, ಶ್ರೀಧರ್ ಅಮೀನ್, ರಾಜೇಶ್ ಇನ್ನಂಜೆ, ಶಿಲ್ಪ ಮಹೇಶ್ ಜತ್ತನ್, ಸಂತೋಷ್ ಕಕ್ಕುಂಜೆ ಮುಂತಾದವರು ಉಪಸ್ಥಿತರಿದ್ದರು. ರಾಫವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
Next Story




