ಮನೆಗೆ ನುಗ್ಗಿ ನಗದು ಕಳವು: ಪ್ರಕರಣ ದಾಖಲು

ಅಮಾಸೆಬೈಲು, ಸೆ.5: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೊತ್ತದ ನಗದು ಕಳವು ಮಾಡಿರುವ ಘಟನೆ ಸೆ.4ರಂದು ಮಧ್ಯಾಹ್ನ ವೇಳೆ ಮಚ್ಚಟ್ಟು ಗ್ರಾಮದಲ್ಲಿ ನಡೆದಿದೆ.
ಆಶಾ ಶೆಟ್ಟಿ ಹಾಗೂ ಅವರ ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಪಾಟಿನ ಬಟ್ಟೆಗಳ ಮಧ್ಯೆ ಇರಿಸಿದ್ದ ಸುಮಾರು 97,000ರೂ. ನಗದು ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




