ದೇವಸ್ಥಾನದ ಕಾಣಿಕೆ ಹುಂಡಿ ಕಳವು: ಪ್ರಕರಣ ದಾಖಲು

ಶಂಕರನಾರಾಯಣ, ಸೆ.5: ಕುಳಂಜೆ ಗ್ರಾಮದ ಮುಂಡುಕೋಡು ಶ್ರೀಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿನ ಹಣ ಕಳವು ಮಾಡಿರುವ ಘಟನೆ ಸೆ.4ರಂದು ಮಧ್ಯಾಹ್ನ ವೇಳೆ ನಡೆದಿದೆ.
ದೇವಸ್ಥಾನದ ಹಿಂಬದಿ ಗೇಟಿನಿಂದ ಒಳಬಂದ ಕಳ್ಳರು, ಕಾಣಿಕೆ ಹುಂಡಿಯನ್ನು ಶಿಲೆಕಲ್ಲಿನಿಂದ ಒಡೆದು ಅದರಲ್ಲಿದ್ದ ಹಣ ಕಳವು ಮಾಡಿದರು. ನಂತರ ಅಲ್ಲಿನ ವೀರಭದ್ರ ದೇವರ ಕಾಣಿಕೆ ಹುಂಡಿಯನ್ನು ರಾಡಿನಿಂದ ಮೀಟಿ ಅದರಲ್ಲಿದ್ದ ಹಣ ಕಳವು ಮಾಡಿ, ಬಳಿಕ ಅಲ್ಲಿನ ನಾಗದೇವರ ಕಾಣಿಕೆ ಹುಂಡಿಯ ಮುಚ್ಚಳ ತೆಗೆದು ನಂತರ ದೇವಸ್ಥಾನದ 2 ರೂಮ್‌ನ ಬೀಗ ತುಂಡರಿಸಿ ಒಳಗೆ ಪ್ರವೇಶಿಸಿ ಜಾಲಾಡಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 35,000-40,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




