ಉತ್ತಮ ಭಾಷಾ ಕುಶಲತೆಯಿಂದ ಸಾಹಿತ್ಯ ರಚನೆ: ನಿತ್ಯಾನಂದ ಪಡ್ರೆ

ಉಡುಪಿ, ಸೆ.6: ಸರಿಯಾದ ಅಕ್ಷರ ಜ್ಞಾನವಿದ್ದರೆ ಶಬ್ದಗಳ ಅರ್ಥ ಗ್ರಹಿಸಲು ಸಾಧ್ಯ. ಶಬ್ದಾರ್ಥ ಸರಿಯಾಗಿ ತಿಳಿದಿದ್ದರೆ ಉತ್ತಮ ವಾಕ್ಯ ರಚನೆ ಸಾಧ್ಯ. ಅದರಿಂದ ಉತ್ತಮ ಭಾಷಾ ಕುಶಲತೆ ಸಾಧ್ಯ. ತನ್ಮೂಲಕ ಒಳ್ಳೆಯ ಸಾಹಿತ್ಯ ರಚನೆಯಾಗುತ್ತದೆ ಎಂದು ವಿಶ್ರಾಂತ ಉಪಸಂಪಾದಕ ನಿತ್ಯಾನಂದ ಪಡ್ರೆ ಹೇಳಿದ್ದಾರೆ.
ಉಡುಪಿ ಎಂ.ಜಿ.ಎಂ. ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಹಿತ್ಯದಲ್ಲಿ ರಸ ಸನ್ನಿವೇಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉತ್ತಮ ಸಾಹಿತ್ಯದಲ್ಲಿ ರಸ ಸನ್ನಿವೇಶಗಳು ತಾನೇ ತಾನಾಗಿ ಸೃಷ್ಟಿಯಾಗುತ್ತದೆ. ಅದರಿಂದ ಉತ್ತಮ ಹಾಸ್ಯ ಹುಟ್ಟುತ್ತದೆ. ಸರಿಯಾದ ಶಬ್ದಗಳು ಅರಿವು ಇಲ್ಲದಿದ್ದರೆ ಅಪಧಗಳಿಂದ ಹಾಸ್ಯಸ್ಪಕ್ಕೆ ಒಳಗಾಗ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಗಾಯತ್ರಿ ಪೈ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಶೈಲಜಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತಕುಮಾರ್, ಕಾರ್ಯಕ್ರಮ ಸಂಯೋಜಕ ಕನ್ನಡ ವಿಭಾಗದ ರಾಘವೇಂದ್ರ ತುಂಗ ಉಪಸ್ಥಿತರಿದ್ದರು. ವಿದ್ಯಾರ್ಥಿ ಪೂಜಾ ಸಿ.ಪಿ ಕಾರ್ಯಕ್ರಮ ನಿರೂಪಿಸಿದರು. ದಶ್ಮಿತಾ ವಂದಿಸಿದರು.






