ಮಾರ್ಪಳ್ಳಿಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ, ಸೆ.6: ಮಾರ್ಪಳ್ಳಿ ಮಹಿಳಾ ಮಂಡಳಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಫಾರ್ಚೂನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್‌ನ ಸ್ಥಾಪಕಿ ಅಕ್ಷತಾ ಕಿರಣ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಚೆಂಡೆ ಬಳಗದ ಅಧ್ಯಕ್ಷ ವಾದಿರಾಜ ಉಪಾಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರತ್ನಾಕರ್ ಜಿ.ಎಸ್., ದಿನೇಶ್ ಸಿ.ನಾಯ್ಕ್ ಅಲೆವೂರು, ಸುಷ್ಮಿತಾ ಹೆಗ್ಡೆ, ಶೇಖರ್ ಸುವರ್ಣ ಗರಡಿಮನೆ, ವಿಜಯ್ ಆರ್.ನಾಯಕ್, ವಿಶ್ವನಾಥ್ ಅಮೀನ್ ಹಾಗೂ ದಿನೇಶ್ ಶೆಟ್ಟಿ ಮಾರ್ಪಳ್ಳಿ, ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅನುರಾಧ ಉದಯ್, ಅಧ್ಯಕ್ಷೆ ಸುಲೋಚನ ನಾಯ್ಕ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಮಾರ್ಪಳ್ಳಿಯ ಗೌರವಾಧ್ಯಕ್ಷ ಲಚೇಂದ್ರ ಬೈಲೂರು ವಹಿಸಿದ್ದರು. ಅತಿಥಿಗಳಾಗಿ ಡಾ.ಉದಯ್ ದೇವಾಡಿಗ, ಯತೀಶ್ ಕುಮಾರ್, ಹರಿದಾಸ್ ಪ್ರಭು, ಉಮೇಶ್ ಮಾರ್ಪಳ್ಳಿ, ಸುಧಾರ್ಕ ಶೇರಿಗಾರ್, ಚಂದ್ರಾವತಿ ಸುವರ್ಣ ಹಾಗೂ ಪುಷ್ಪಲತಾ ರಮಾನಂದ್ ಉಪಸ್ಥಿತರಿದ್ದರು.
ಯುಕ್ತ ಆರ್.ಭಟ್ ನಿರೂಪಿಸಿದರು. ಕವಿತಾ ಮನೋಜ್ ಹಾಗೂ ವಿನುತ ಗಣೇಶ್ ವಂದಿಸಿದರು. ತೀರ್ಪುಗಾರರಾಗಿ ವಿದುಷಿ ಅನ್ವಿತಾ ಕೋಟ್ಯಾನ್ ಹಾಗೂ ವಿದುಷಿ ಸುಮಲತಾ ಪ್ರಶಾಂತ್ ಸಹಕರಿಸಿದರು. ಸ್ಪರ್ಧೆಯಲ್ಲಿ ಸುಮಾರು 75 ಮಕ್ಕಳು ಭಾಗವಹಿಸಿದ್ದರು.






