ಶ್ರಾವಣ ಸಂಭ್ರಮ, ಆಟಿಕೂಟಗಳು ಪರಂಪರೆ ಪರಿಚಯಿಸಲು ಪೂರಕ: ಡಾ.ಉಷಾ ನಾಯಕ್

ಶಿರ್ವ, ಸೆ.6: ನಮ್ಮ ಸಂಪ್ರದಾಯ, ಸಂಸ್ಕೃತಿಯೊಂದಿಗೆ ಭಕ್ತಿಯ ಸ್ಮುಳಿತ ವಾದಾಗ ನಮ್ಮ ಹಿರಿಯರ ಪರಂಪರೆ, ಆಚಾರ, ವಿಚಾರಗಳು ಜೀವಂತ ವಾಗಿರಿಸಿ ಮುಂದಿನ ಪೀಳಿಗೆಗೆಯಲ್ಲಿ ಉಳಿಸಿ ಬೆಳೆಸುವಂತೆ ಮಾಡುವಲ್ಲಿ ಶ್ರಾವಣ ಸಂಭ್ರಮ, ಆಟಿಕೂಟ, ಕೆಸರಡ್ ಒಂಜಿದಿನ ಕಾರ್ಯಕ್ರಮಗಳು ಪೂರಕವಾಗಿವೆಂದು ನಿವೃತ್ತ ಉಪನ್ಯಾಸಕಿ ಡಾ.ಉಷಾ ಎಚ್. ಹೇಳಿದ್ದಾರೆ.
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ರವಿವಾರ ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ವತಿಯಿಂದ ಸಂಸ್ಕೃತಿ, ಸಂತೃಪ್ತಿ, ಸಂಪ್ರದಾಯಗಳ ಸಂಗಮ, ಸಂತಸ ಸಡಗರ ಸಂಭ್ರಮಗಳ ಸಮಾಗಮ, ಸಂಭ್ರಮದ ಆಚರಣೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಮಣಿಪಾಲ ನರಸಿಂಗೆ ಶ್ರೀನರಸಿಂಹ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಹವ್ಯಾಸಿ ಯಕ್ಷ ಕಲಾವಿದ ನಿವೃತ್ತ ರೈಲ್ವೇ ಅಧಿಕಾರಿ ರಘುನಾಥ್ ನಾಯಕ್ ಎಣ್ಣೆಹೊಳೆ ಮತ್ತು ಭಾರತೀಯ ಸೇನೆಯ ಡಾ.ಸಹನಾ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾವಂತ ಬಡದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಡವರ್ಗದ ಕುಟುಂಬಗಳಿಗೆ ಸಹಾಯಧನ ವಿತರಿಸಲಾ ಯಿತು. ದೇವಳದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿದರು.
ಹಿರಿಯ ದಂಪತಿ ಮಾನಿಪಾಡಿ ಕೃಷ್ಣಮೂರ್ತಿ ನಾಯಕ್, ಭಾರತಿ ನಾಯಕ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿದ್ದರು. ಚಂಡೆ ಬಳಗದ ಸದಸ್ಯರಿಗೆ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಿದ ಗುರುತುಚೀಟಿಯನ್ನು ವಿತರಿಸಲಾಯಿತು.
ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ವನಿತಾ ದೇವೇಂದ್ರ ಬೋರ್ಕಾರ್ ವೇದಿಕೆಯಲ್ಲಿದ್ದರು. ನೀಲವೇಣಿ ಅರುಣ್ ಪ್ರಭು ವರದಿ ಓದಿದರು. ವಿದ್ಯಾ ನಾಯಕ್, ಶೈಲಜಾ ಪಾಟ್ಕರ್ ಪರಿಚಯಿಸಿದರು. ಕುಸುಮಾ ಕಾಮತ್ ನಿರೂಪಿಸಿ ದರು. ಭವಾನಿ ನಾಯಕ್ ವಂದಿಸಿದರು. ನಂತರ ಶ್ರಾವಣ ಮಾಸದ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಂದ ಕೂಡಿದ ವೈಶಿಷ್ಠ್ಯಪೂರ್ಣ ಸ್ನೇಹಕೂಟ ನಡೆಯಿತು.






